ಚಿತ್ರ: ನೆನಪಿರಲಿ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಚಿತ್ರ ಕೆ.

ಯಾಹು ಯಾಹೂ!!

ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಶ್ಪಕೂಲಕ್ಕು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!

ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಶ್ಪಕೂಲಕ್ಕು ಹಬ್ಬ!

ಈ ... ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ.. ಇಲ್ಲಿದೆ ಬಿಸಿಲ ಬಿಸಿ

ಹೃದಯ ಬಯಸುವ ಸುಖದ ಚಿತ್ರಕೆ.. |೨|
ಕಣ್ಗಳೆ ಗಾಜಿನ ಪರದೆಯು

ಇಂದು ಉಸಿರಿಗೆ ಹಬ್ಬ
ಉಬ್ಬುವೆದೆಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!

ಇಂದು ಮರಳಿಗೆ ಹಬ್ಬ
ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ
ಅಪ್ಪೊ ಅಲೆಗು ಹಬ್ಬ

ಓ ... ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ.. ನೆನಪಿಗೆ.. ಋತುಗಳ ಜೂಟಾಟಕೆ
ಸೊಗಸಿನಿಂದಲೆ ಸೊಗಸ ಸವಿಯುವ |೨|
ಸೊಗಸಿಗೆ ಚೆಲುವಿನ ಹೆಸರಿದೆ

ಇಂದು ಚೆಲುವಿಗೆ ಹಬ್ಬ
ಒಳ ಒಲವಿಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ

ಯಾಹು ಯಾಹೂ!!

Category: ಕನ್ನಡ ಚಿತ್ರಸಾಹಿತ್ಯ
Category: ನೆನಪಿರಲಿ ಚಿತ್ರ
Category: ಹಂಸಲೇಖ ಸಾಹಿತ್ಯ
Category:Kannada